ಹೊಸಪೇಟೆಯಲ್ಲಿ ಕರ್ನಾಟಕ ಬಂದ್ಗೆ ಉತ್ತಮ ಪ್ರತಿಕ್ರಿಯೆ... ಪ್ರತ್ಯಕ್ಷ ವರದಿ - ಬಳ್ಳಾರಿಯ ಹೊಸಪೇಟೆ ನಗರ ಬಂದ್
🎬 Watch Now: Feature Video
ಬಳ್ಳಾರಿಯ ಹೊಸಪೇಟೆ ನಗರದಲ್ಲಿ ಕರ್ನಾಟಕ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೋಟರಿ ವೃತ್ತದಲ್ಲಿ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಅಲ್ಲದೆ ಮೇನ್ ಬಜಾರ್, ವಾಲ್ಮೀಕಿ ವೃತ್ತ, ಮದಕರಿ ವೃತ್ತ, ಪುಣ್ಯ ಮೂರ್ತಿ ವೃತ್ತ, ಅಂಬೇಡ್ಕರ್ ವೃತ್ತ, ಮಾರ್ಡನ್ ವೃತ್ತ, ಮೂರಂಗಡಿ ವೃತ್ತ, ಡ್ಯಾಂ ರಸ್ತೆಯ ಪ್ರಮುಖ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಈಗಾಗಲೇ ರೈತ, ಕಾರ್ಮಿಕ, ದಲಿತ, ಕನ್ನಡಪರ ಸಂಘಟನೆಗಳು ರೋಟರಿ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮಕ್ಕಾಗಿ ಟೆಂಟ್ ಹಾಕಲಾಗಿದೆ. ಬಸ್ ಸಂಚಾರ ಲಭ್ಯವಿದ್ದರೂ ಪ್ರಯಾಣಿಕರು ಬಸ್ ನಿಲ್ದಾಣದ ಬಳಿ ಸುಳಿಯುತ್ತಿಲ್ಲ. ಕೆಲವೊಂದು ಆಟೋಗಳು, ಬೈಕ್ಗಳು ಮಾತ್ರ ಸಂಚಾರ ಮಾಡುತ್ತಿವೆ. ಈ ಕುರಿತು ನಮ್ಮ ಪ್ರತಿನಿಧಿ ಹೊಸಪೇಟೆಯಿಂದ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ..