ಹಾವೇರಿಯಲ್ಲಿ ಕೊನೆಗೂ ಕಸ ವಿಲೇವಾರಿ: ಇದು ಈಟಿವಿ ಭಾರತ ವರದಿ ಪರಿಣಾಮ - Garbage Disposal problem in haveri

🎬 Watch Now: Feature Video

thumbnail

By

Published : Jun 20, 2020, 4:05 PM IST

ಹಾವೇರಿ: ನಗರದ ಕಸದರಾಶಿ ಕುರಿತಂತೆ ಈಟಿವಿ ಭಾರತದಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ನಗರಸಭೆ ಎಚ್ಚೆತ್ತುಕೊಂಡು ಕಸವಿಲೇವಾರಿಗೆ ಮುಂದಾಗಿದೆ. ಈ ಹಿಂದೆ ಇದ್ದ ಪೌರಕಾರ್ಮಿಕರನ್ನ ತಾತ್ಕಾಲಿಕವಾಗಿ ಕೆಲಸಕ್ಕೆ ಕರೆದುಕೊಂಡಿದ್ದು ನೌಕರರು ಕಸ ವಿಲೇವಾರಿ ಮಾಡುತ್ತಿದ್ದ ದೃಶ್ಯ ಕಂಡುಬಂತು. ಮುಂಜಾನೆಯಿಂದಲೇ ಮನೆ ಮನೆಗೆ ತೆರಳಿದ ವಾಹನಗಳು ಕಸವನ್ನು ಸಂಗ್ರಹಿಸಿ ಕಸ ವಿಲೇವಾರಿ ಮಾಡಿದವು. ಅಲ್ಲದೆ ಸಾರ್ವಜನಿಕ ಪ್ರದೇಶಗಳಲ್ಲಿ ಬಿದ್ದಿದ್ದ ಕಸದ ರಾಶಿಯನ್ನ ವಿಲೇವಾರಿ ಮಾಡಲಾಯಿತು. ನೇಮಕಾತಿ ಗೊಂದಲ ಸದ್ಯ ಬದಿಗಿಟ್ಟ ನಗರಸಭೆ ಈ ಹಿಂದೆ ಇದ್ದ ನೌಕರರಿಗೆ ಬೇರೆ ಅನುದಾನದಡಿ ಹಣ ಹೊಂದಿಸಿಕೊಂಡು ಕೆಲಸಕ್ಕೆ ಕರೆಸಿಕೊಂಡಿದೆ. ಇದರಿಂದಾಗಿ ಕಳೆದ 20 ದಿನಗಳಿಂದ ನಗರದಲ್ಲಿದ್ದ ಕಸ ವಿಲೇವಾರಿ ಸಮಸ್ಯೆ ಬಗೆಹರಿದಂತಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.