ಗಣಪತಿ ನಿಮಜ್ಜನ ಮೆರವಣಿಗೆ: ಸಖತ್ ಸ್ಟೆಪ್ಸ್ ಹಾಕಿದ ಶಾಸಕ - ಚಿಕ್ಕಮಗಳೂರು ಜಿಲ್ಲೆ ಸುದ್ದಿ
🎬 Watch Now: Feature Video
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ನಗರದಲ್ಲಿ ಗಣಪತಿ ನಿಮಜ್ಜನ ಸಂದರ್ಭದಲ್ಲಿ ಶಾಸಕ ಡಿ.ಎನ್.ಸುರೇಶ್ ಸಖತ್ ಡ್ಯಾನ್ಸ್ ಮಾಡಿದ್ದಾರೆ. ನೂರಾರು ಯುವಕರೊಂದಿಗೆ ಶಾಸಕರು ಹೆಜ್ಜೆ ಹಾಕಿದ್ದಾರೆ. ನಗರದ ಪ್ರಮುಖ ಬೀದಿಗಳಲ್ಲಿ ಕುಣಿದು ಕುಪ್ಪಳಿಸಿರುವ ಶಾಸಕರ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಸಾಲುಮಾರದಮ್ಮ ದೇವಸ್ಥಾನದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಾಗಿತ್ತು. ಅಲ್ಲಿಂದ ಆರಂಭವಾದ ಮೆರವಣಿಗೆಯಲ್ಲಿ ಶಾಸಕರೂ ಸಹ ಯುವಕರೊಂದಿಗೆ ಭರ್ಜರಿ ಸ್ಟೆಪ್ಸ್ ಹಾಕಿ ಗಮನ ಸೆಳೆದಿದ್ದಾರೆ.