ಮಹದೇವಪುರದ ಅಪಾರ್ಟ್ಮೆಂಟ್ ನಿವಾಸಿಗಳಿಂದ ವಿಜೃಂಭಣೆಯ ಗಣೇಶೋತ್ಸವ - 10 ಸಾವಿರಕ್ಕೂ ಹೆಚ್ಚು ನಿವಾಸಿಗಳಿಂದ ಹಬ್ಬ ಆಚರಣೆ
🎬 Watch Now: Feature Video

ಬೆಂಗಳೂರು : ಬೆಂಗಳೂರಿನ ವೈಟ್ ಫೀಲ್ಡ್ ಶಾಂತಿನಿಕೇತನ ಅಪಾರ್ಟ್ಮೆಂಟ್ನಲ್ಲಿ 3,500 ಪ್ಲಾಟ್ಗಳ ಎಲ್ಲ ಸಮುದಾಯದವರು ಒಂದೆಡೆ ಸೇರಿ ಗಣಪತಿ ಹಬ್ಬವನ್ನು ಆಚರಿಸಿದರು. ಸೂರ್ಯನ ರಥದಲ್ಲಿ ಕುಳಿತ ವಿನಾಯಕ, ರಾಜಬೀದಿಯಲ್ಲಿ ಮೆರವಣಿಗೆ ಬರುತ್ತಿದ್ದರೆ ಇಲ್ಲಿನ 10 ಸಾವಿರಕ್ಕೂ ಹೆಚ್ಚು ನಿವಾಸಿಗಳಿಂದ ಗಣಪನ ಮುಂದೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಎಲ್ಲಾ ರಾಜ್ಯಗಳ ಜನರು ಇಲ್ಲಿ ವಾಸಿಸುತ್ತಿರುವುದರಿಂದ ದೇಶದಲ್ಲಿನ ಎಲ್ಲಾ ಬಗೆಯ ನೃತ್ಯ ರೂಪಕಗಳನ್ನು ಇಲ್ಲಿ ಕಂಡು ಬಂದಿದ್ದು, ಇದನ್ನು ನೋಡಲು ಎರಡು ಕಣ್ಣುಗಳು ಸಾಲದಂತಿದ್ದವು. ಇಲ್ಲಿ ಆಶ್ವರೋಹಿಗಳಾಗಿದ್ದಂತಹ ಮಹಿಳಾ ಮಣಿಗಳು ಬೈಕನ್ನೇರಿ ವಿನಾಯಕನ ರಕ್ಷಣೆಗೆ ನಿಂತಿದ್ದು ಈ ಮಹೋತ್ಸವಕ್ಕೆ ಮತ್ತಷ್ಟು ಮೆರುಗನ್ನು ತಂದುಕೊಟ್ಟಿತ್ತು.