ಟ್ರ್ಯಾಕ್ಟರ್ ಒಳಗೆ ಗಣೇಶ ಮೂರ್ತಿಗಳ ನಿಮಜ್ಜನ: ಹಾಸನ ನಗರಸಭೆಯ ವಿನೂತನ ಪ್ಲಾನ್! - ಪಿಓಪಿ ಗಣಪತಿ
🎬 Watch Now: Feature Video
ಹಾಸನ: ನಗರಸಭೆ ವ್ಯಾಪ್ತಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಪುಟ್ಟ ಗಣಪತಿಗಳನ್ನು ನಿಮಜ್ಜನ ಮಾಡುವುದಕ್ಕೆ ಟ್ರ್ಯಾಕ್ಟರ್ ಒಳಗೆ ನೀರು ತುಂಬಿ ಅವಕಾಶ ಕಲ್ಪಿಸಲಾಗಿತ್ತು. ಎಲ್ಲೆಂದರಲ್ಲಿ ಕೆರೆಗೆ ಗಣಪತಿ ನಿಮಜ್ಜನ ಮಾಡಲಾಗುತ್ತಿತ್ತು. ಜೊತೆಗೆ ಪಿಒಪಿ ಗಣಪತಿಯನ್ನು ಕೆರೆಯ ಒಳಗೆ ಬಿಡುವುದರ ಮೂಲಕ ನೀರು ಮಲಿನವಾಗುತ್ತಿತ್ತು. ಇದನ್ನರಿತ ನಗರಸಭೆ ಕಳೆದ ಹಲವಾರು ವರ್ಷಗಳಿಂದ ಪಿಒಪಿ ಗಣಪತಿ ನಿಷೇಧಿಸಿ, ಮಣ್ಣಿನ ಗಣಪತಿಗೆ ಆದ್ಯತೆ ನೀಡಿತ್ತು. ಟ್ರ್ಯಾಕ್ಟರ್ ಒಳಗೆ ಪ್ಲಾಸಿಕ್ ಅಳವಡಿಸಿ, ಅದರೊಳಗೆ ನೀರು ತಂಬಿಸಿ ಗಣಪತಿ ನಿಮಜ್ಜನಕ್ಕೆ ಅವಕಾಶ ನೀಡಲಾಗಿದೆ. ನಗರಸಭೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲೂ ಮುಖ್ಯ ರಸ್ತೆಯಲ್ಲಿ ಗಣಪತಿ ನಿಮಜ್ಜನ ಮಾಡುವ ಸೌಕರ್ಯ ಕಲ್ಪಿಸಲಾಗಿತ್ತು. ಸಂಜೆ ವೇಳೆಗೆ ಸಾರ್ವಜನಿಕರು ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಗಳನ್ನು ಮೆರವಣಿಗೆ ಮೂಲಕ ಆಗಮಿಸಿ ನೀರಿನಲ್ಲಿ ನಿಮಜ್ಜನ ಮಾಡಿದರು.
Last Updated : Sep 4, 2019, 12:02 PM IST