ಗಗನಚುಕ್ಕಿ ಜಲಪಾತೋತ್ಸವ: ಬೈಕ್ ರ‍್ಯಾಲಿಗೆ ಚಾಲನೆ - ಗಗನಚುಕ್ಕಿ ಜಲಪಾತೋತ್ಸವ
🎬 Watch Now: Feature Video
ಮಂಡ್ಯ: ಜನವರಿ 18, 19 ರಂದು ಮಳವಳ್ಳಿಯ ಗಗನಚುಕ್ಕಿ ಬಳಿ ಜಲಪಾತೋತ್ಸವ ನಡೆಯಲಿದೆ. ಉತ್ಸವದ ಹಿನ್ನೆಲೆ ಇಂದು ಬೈಕ್ ರ‍್ಯಾಲಿಗೆ ಸ್ಥಳೀಯ ಶಾಸಕ ಡಾ. ಅನ್ನದಾನಿ ಚಾಲನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಶಾಸಕರು ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಉತ್ಸವಕ್ಕೆ ಶುಭ ಹಾರೈಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಉತ್ಸವ ನಡೆಯಲಿದೆ. ಉತ್ಸವ ಹಿನ್ನೆಲೆ ಸಾರ್ವಜನಿಕರ ಗಮನ ಸೆಳೆಯಲು ಬೈಕ್ ರ‍್ಯಾಲಿ ಆಯೋಜನೆ ಮಾಡಲಾಗಿದೆ.