ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಮತದಾನ ಮಾಡಿ ಗಮನ ಸೆಳೆದ ವ್ಯಕ್ತಿ - ಗದಗ ಇತ್ತೀಚಿನ ಸುದ್ದಿ
🎬 Watch Now: Feature Video
ಗದಗ: ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯೊಬ್ಬರು ನೋವನ್ನೂ ಲೆಕ್ಕಿಸದೆ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಮತ ಚಲಾಯಿಸುವ ಮೂಲಕ ಗಮನ ಸೆಳೆದಿದ್ದಾರೆ. ನಗರದ ಪುಟ್ಟರಾಜ ನಗರ ನಿವಾಸಿ ಮರ್ದಾನ್ ಅಲಿ ದೊಡ್ಡಮನಿ ಎಂಬುವರು ಆ್ಯಂಬುಲೆನ್ಸ್ನಲ್ಲಿ ಮತಗಟ್ಟೆ ಸಂಖ್ಯೆ 59ಕ್ಕೆ ಆಗಮಿಸಿ, ಮತ ಚಲಾಯಿಸಿದರು. ನಾಲ್ಕು ದಿನಗಳ ಹಿಂದೆ ಅಪಘಾತಕ್ಕೀಡಾಗಿದ್ದ ಮರ್ದಾನ್ ಅಲಿ ಅವರ ಕಾಲು ಮುರಿದಿದ್ದರಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆಗೆ ಮತದಾನ ಮಾಡಬೇಕು ಎಂದು ವೈದ್ಯರ ಬಳಿ ಮನವಿ ಮಾಡಿದ್ದರು. ಈ ಹಿನ್ನೆಲೆ ಇಂದು ಮತದಾನ ಮಾಡಿ ಗಮನ ಸೆಳೆದರು.