ಆಕಸ್ಮಿಕ ಬೆಂಕಿ ಅವಘಡ... ಧಗಧಗನೆ ಹೊತ್ತಿ ಉರಿದ ಹಣ್ಣು ತುಂಬಿದ ಟೆಂಪೋ - ಹಣ್ಣು ತುಂಬಿದ ಟೆಂಪೋಗೆ ಬೆಂಕಿ
🎬 Watch Now: Feature Video

ಚಾಮರಾಜನಗರ: ಆಕಸ್ಮಿಕ ಬೆಂಕಿಗೆ ಹಣ್ಣು ತುಂಬಿದ ಟೆಂಪೋ ಧಗಧಗಿಸಿ ಉರಿದ ಘಟನೆ ನಗರದ ಅಗ್ರಹಾರ ಬೀದಿಯಲ್ಲಿ ರಾತ್ರಿ ನಡೆದಿದೆ. ನಾಸೀರ್ ಪಾಶ ಎಂಬುವವರಿಗೆ ಸೇರಿದ ಹಣ್ಣು ಮಾರಾಟದ ವಾಹನ ಆಕಸ್ಮಿಕ ಬೆಂಕಿಗೆ ತುತ್ತಾಗಿ ಹಣ್ಣು-ಹಂಪಲು ಸಮೇತ ಟೆಂಪೋ ಭಸ್ಮವಾಗಿದೆ. 2 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದು, ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.