ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು - ಹಾಲನೂರು ಹಾಗೂ ಆಚಾರ್ಯ ಪಾಳ್ಯ ಗ್ರಾಮ
🎬 Watch Now: Feature Video
ತುಮಕೂರು: ಒಂದು ವಾರದಿಂದ ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಇಂದು ಹೆಣ್ಣು ಚಿರತೆಯೊಂದಕ್ಕೆ ಬಲೆ ಹಾಕಿದ್ದಾರೆ. ತಾಲೂಕು ಹಾಲನೂರು ಹಾಗೂ ಆಚಾರ್ಯ ಪಾಳ್ಯ ಗ್ರಾಮದ ನಡುವಿನ ಹೇಮಾವತಿ ಚಾನಲ್ ಸಮೀಪ ಅಡಗಿ ಕುಳಿತಿದ್ದ ಚಿರತೆ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಸುತ್ತಲೂ ಬಿಗಿ ಬಂದೋಬಸ್ತ್ ಮಾಡಿದ್ದರು. ಬಳಿಕ ಅಡಗಿ ಕುಳಿತಿದ್ದ ಚಿರತೆಗೆ ಅರವಳಿಕೆ ಚುಚ್ಚುಮದ್ದನ್ನು ಬಂದೂಕಿನ ಮೂಲಕ ಶೂಟ್ ಮಾಡಿದ್ದಾರೆ. ನಂತರ ಅರೆಪ್ರಜ್ಞಾಸ್ಥಿತಿಗೆ ಬಂದ ಚಿರತೆಯನ್ನು ಬಲೆ ಹಾಕಿ ತಂದು ಬೋನಿನೊಳಗೆ ಇರಿಸಿದರು.