ಕುಂದುವಾಡದಿಂದ ಕೊಂಡಜ್ಜಿ ಕೆರೆಗೆ ಹಾರಿದ ವಿದೇಶಿ ಪಕ್ಷಿಗಳು! - foreign-birds in davanagere
🎬 Watch Now: Feature Video
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ 250 ಎಕರೆಯಲ್ಲಿ ಹರಡಿರುವ ಕುಂದುವಾಡ ಕೆರೆಗೆ ಪ್ರತಿವರ್ಷ ಬರುತ್ತಿದ್ದ ಪಕ್ಷಿಗಳು ಈಗ ಮಾರ್ಗ ಬದಲಿಸಿ, ಹರಿಹರ ತಾಲೂಕಿನ ಕೊಂಡಜ್ಜಿ ಕೆರೆಯತ್ತ ಮುಖಮಾಡುತ್ತಿವೆ. ಈ ಕೆರೆಯಲ್ಲಿ ಜಾನುವಾರುಗಳ ಮೈ ತೊಳೆಯುವುದಕ್ಕೆ, ನೀರು ಕುಡಿಸುವುದಕ್ಕೆ ನಿಷೇಧ ಹೇರಿ, ಪಕ್ಷಿಗಳ ವಾಸಕ್ಕೆ ಅನುಕೂಲಕರ ವಾತಾವರಣ ನಿರ್ಮಿಸಿದ್ದರು. ಆದರೂ ಪಕ್ಷಿಗಳು ಮಾರ್ಗ ಬದಲಿಸಿರುವುದು ಪಕ್ಷಿ ಪ್ರೇಮಿಗಳಲ್ಲಿ ನಿರಾಸೆಯುಂಟು ಮಾಡಿದೆ.