ಜಿ.ಪಂ ಸದಸ್ಯರಿಂದ ಬಡವರಿಗೆ ಆಹಾರ ಸಾಮಗ್ರಿ ವಿತರಣೆ - corona virus attack
🎬 Watch Now: Feature Video
ಲಾಕ್ ಡೌನ್ ಆದೇಶದಿಂದ ದಿನದ ದುಡಿಮೆ ನಂಬಿ ಬದುಕುತ್ತಿದ್ದ ಕುಟುಂಬಗಳು ಆಹಾರಕ್ಕಾಗಿ ಪರದಾಡುತ್ತಿದ್ದವು. ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸದಸ್ಯರಿಂದ ಬುಡಕಟ್ಟು ಜನಾಂಗ ಸೇರಿದಂತೆ ದಿನಗೂಲಿ ಮಾಡುತ್ತಿದ್ದ ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ರೇಖಾ, ಪತಿ ಉಮೇಶ್ ಹೊಳೆಹೊನ್ನೂರು ಗ್ರಾಮದ ಹೊರ ಭಾಗದ ಮಲ್ಲಿಗೆ ನಗರ ಲೇಔಟ್ನ 20ಕ್ಕೂ ಹೆಚ್ಚು ಬುಡಕಟ್ಟು ಜನಾಂಗದವರಿಗೆ ಅಕ್ಕಿ, ಬೇಳೆ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಿದರು. ದೇವೆಂದ್ರಪ್ಪ ಹಾಗೂ ಅವರ ತಂಡ ಶಿವಮೊಗ್ಗದ ನಗರದಲ್ಲಿ ಇರುವ ಭಿಕ್ಷುಕರು ಹಾಗೂ ಅಸಹಾಯಕರಿಗೆ ತಮ್ಮ ಮನೆಯಲ್ಲೆ ತಯಾರಿಸಿದ ಆಹಾರವನ್ನು ನೀಡಿದರು.