ಲಾಕ್ಡೌನ್ ತಂದಿಟ್ಟ ಸಂಕಷ್ಟ.. ಸೇವಂತಿಗೆಗೆ ಸೂಕ್ತ ಬೆಲೆ ಸಿಗದೆ ರೈತನಿಂದ ಬೆಳೆ ನಾಶ - marigold crop destroyed by a farmer due to no market in lock down
🎬 Watch Now: Feature Video
ಹಾವೇರಿ: ತಾಲೂಕಿನ ನಾಗನೂರಿನಲ್ಲಿ ರೈತನೊಬ್ಬ ಸೂಕ್ತ ಬೆಲೆ ಸಿಗದೆ ಸೇವಂತಿ ಬೆಳೆ ನಾಶ ಮಾಡಿದ್ದಾನೆ. ಹೊಳೆಯಪ್ಪ ಸಂಗಾಪುರ ಎಂಬ ರೈತ ಒಂದು ಎಕರೆಯಲ್ಲಿ ಸೇವಂತಿ ಬೆಳೆದಿದ್ದ. ಲಾಕ್ಡೌನ್ ಎಫೆಕ್ಟ್ನಿಂದ ಕೊಳ್ಳುವವರಿಲ್ಲದೇ ಟ್ರ್ಯಾಕ್ಟರ್‌ನಿಂದ ಸೇವಂತಿಗೆಯನ್ನು ನೆಲಸಮ ಮಾಡಿದ್ದಾನೆ. ಒಂದು ಎಕರೆ ಸೇವಂತಿ ಬೆಳೆಯಲು 30 ಸಾವಿರಕ್ಕೂ ಅಧಿಕ ಹಣ ಖರ್ಚು ಮಾಡಿದ್ದಾನೆ. ಆದರೆ ಸೇವಂತಿಗೆ ಸರಿಯಾದ ಬೆಲೆ ಮತ್ತು ಮಾರುಕಟ್ಟೆ ಸಿಗದಿರುವುದರಿಂದ ರೈತ ಕಂಗೆಟ್ಟು ಈ ನಿರ್ಧಾರ ಕೈಗೊಂಡಿದ್ದಾನೆ.