ಬಾಗಲಕೋಟೆಯಲ್ಲಿ ಉಂಟಾದ ಪ್ರವಾಹ: ಆತಂಕಗೊಂಡ ಜನತೆ - ಬಾಗಲಕೋಟೆ ಪ್ರವಾಹ ಸುದ್ದಿ
🎬 Watch Now: Feature Video
ಬಾಗಲಕೋಟೆ: ಬೆಳಗಾವಿ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ ಭಾರಿ ಮಳೆ ಆಗುತ್ತಿರುವ ಪರಿಣಾಮ ಬಾಗಲಕೋಟೆ ಜಿಲ್ಲೆಯಲ್ಲಿ ಹರಿಯುತ್ತಿರುವ ಮಲ್ಲಪ್ರಭಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ ನದಿ ಪಾತ್ರದ ಭಾಗಗಳಲ್ಲಿ ಪ್ರವಾಹ ಭೀತಿ ತಲೆದೋರಿದೆ. ಚೊಳಚ್ಚಗುಡ್ಡ, ಮನ್ನೇರಿ ಗ್ರಾಮ ಸೇರಿದಂತೆ ಇತರ ಗ್ರಾಮಗಳಲ್ಲಿ ಮತ್ತೆ ನೆರೆ ಭೀತಿ ಇದ್ದು, ಜನತೆ ಆತಂಕಗೊಂಡಿದ್ದಾರೆ. ನವೀಲುತೀರ್ಥ ಜಲಾಶಯದಿಂದ 35 ಸಾವಿರ ಕ್ಯೂಸೆಕ್ ನೀರು ಬಿಟ್ಟ ಪರಿಣಾಮ ಪ್ರವಾಹ ಉಂಟಾಗಿದ್ದು, ಗಾಯ ಆರುವ ಮುಂಚೆ ಮತ್ತೆ ಬರೆ ಎಳೆದಂತಾಗಿದೆ.