ಇನ್ನೂ ಸಿಗದ ನೆರೆ ಪರಿಹಾರ: ಆಕ್ರೋಶಗೊಂಡ ಸಂತ್ರಸ್ತರಿಂದ ಪ್ರತಿಭಟನೆ - Protest
🎬 Watch Now: Feature Video
ಬೆಳಗಾವಿ: ನೆರೆ ಸಂತ್ರಸ್ತರಿಗೆ ಆರಂಭಿಕವಾಗಿ ಸಿಗಬೇಕಿದ್ದ ಹತ್ತು ಸಾವಿರ ರೂ. ಪರಿಹಾರ ಚೆಕ್ ಸಿಗದ ಹಿನ್ನಲೆ ಗೋಕಾಕ್ ತಾಲೂಕು ಮೇಳವಂಕಿ ಹಾಗೂ ತಳಕಟನಾಳ ಗ್ರಾಮದ ಸಂತ್ರಸ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ತಳಕಟನಾಳ ಗ್ರಾಮಪಂಚಾಯಿತಿಗೆ ಬೀಗ ಜಡಿದ ಸಂತ್ರಸ್ತರು ರಸ್ತೆ ತಡೆದು ಟೈಯರ್ ಗೆ ಬೆಂಕಿ ಹಚ್ಚಿ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಪ್ರವಾಹ ಸಂತ್ರಸ್ತರಿಗೆ ರಾಜ್ಯ ಸರ್ಕಾರ 10 ಸಾವಿರ ಆರಂಭಿಕ ಪರಿಹಾರ ನೀಡುವ ಭರವಸೆ ನೀಡಿತ್ತು, ಕೆಲವೆಡೆ ಪರಿಹಾರ ಚೆಕ್ ವಿತರಿಸಲಾಗಿದೆ. ಆದರೆ ಗೋಕಾಕ್ ತಾಲೂಕಿನ ಮೇಳವಂಕಿ ಹಾಗೂ ತಳಕಟನಾಳ ನೆರೆ ಸಂತ್ರಸ್ತರಿಗೆ ಪರಿಹಾರ ಚೆಕ್ ಸಿಕ್ಕಿಲ್ಲ.ಆದ್ದರಿಂದ ಅಧಿಕಾರಿಗಳು ಸ್ಥಳಕ್ಕೆ ಬಂದು ಕೂಡಲೇ ಚೆಕ್ ವಿತರಿಸುವಂತೆ ಪ್ರತಿಭಟನಾ ನಿರತರು ಪಟ್ಟು ಹಿಡಿದರು.