ಮಳೆ ಪರಿಹಾರದ ಚೆಕ್​ ಪಡೆದು ದಲ್ಲಾಳಿಗಳ ಮೊರೆ ಹೋದ ಸಿಲಿಕಾನ್​ ಸಿಟಿ ಸಂತ್ರಸ್ತರು - ಮಳೆ ಪರಿಹಾರದ ಚೆಕ್​

🎬 Watch Now: Feature Video

thumbnail

By

Published : Oct 26, 2020, 4:07 PM IST

ಬೆಂಗಳೂರು: ರಾಜಧಾನಿಯಲ್ಲಿ ಮೂರು‌ ದಿನ‌ದ ಹಿಂದೆ ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಮಳೆಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಈಗಾಗಲೇ ಚೆಕ್ ವಿತರಿಸಲಾಗಿದೆ. ಸಂತ್ರಸ್ತರು ಈ ಚೆಕ್​ ಅನ್ನು ಬ್ಯಾಂಕಿಗೆ ಹಾಕುವ ಬದಲು ದಲ್ಲಾಳಿಗಳಿಗೆ ನೀಡಿದ್ದಾರೆ. ಹೊಸಕೆರೆ ಹಳ್ಳಿಯಲ್ಲಿ ಮಳೆರಾಯ ಅವಾಂತರ ಸೃಷ್ಟಿಸಿದ ಹಿನ್ನೆಲೆ ಸರ್ಕಾರ ಪರಿಹಾರ ಚೆಕ್ ವಿತರಣೆ ಮಾಡಿದ್ದು, ಹಬ್ಬದ ಪ್ರಯುಕ್ತ ಬ್ಯಾಂಕ್​ ರಜೆ ಇರುವ ಕಾರಣ ‌ಇದೀಗ ಅದೇ ಜಾಗಕ್ಕೆ‌ ದಲ್ಲಾಳಿಗಳು ಎಂಟ್ರಿ ಕೊಟ್ಟಿದ್ದಾರೆ. ಪ್ರತೀ ಚೆಕ್​​ಗೆ 500 ರಿಂದ 1000ರೂ ಕಮೀಷನ್ ಪಡೆದು ಹಣ ನೀಡುತ್ತಿದ್ದಾರೆ. ಸಂತ್ರಸ್ತರು ಸಹ ಬ್ಯಾಂಕಿಗೆ ಹೋಗುವ ಬದಲು ದಲ್ಲಾಳಿಗಳ ಮೊರೆ ಹೋಗಿರುವುದು ವಿಪರ್ಯಾಸವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.