ಗೋಕಾಕಿಗೆ ಮತ್ತೆ ಪ್ರವಾಹ ಭೀತಿ: ಹಿಡಕಲ್ ಡ್ಯಾಂನಿಂದ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ - ಹಿಡಕಲ್ ಜಲಾಶಯ
🎬 Watch Now: Feature Video
ಬೆಳಗಾವಿ: ಹಿಡಕಲ್ ಜಲಾಶಯದಿಂದ ಬಿಡಲಾದ ಭಾರೀ ಪ್ರಮಾಣದ ನೀರಿನಿಂದ ಕೆಲ ದಿನಗಳ ಹಿಂದೆ ಮುಳುಗಿದ್ದ ಗೋಕಾಕ ನಗರಕ್ಕೆ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಕಾರಣ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿದೆ. ಹೀಗಾಗಿ ಹಿಡಕಲ್ ಜಲಾಶಯದಿಂದ ಇಂದು ಗೋಕಾಕ ಫಾಲ್ಸ್‌ಗೆ ನೀರು ಬಿಡುಗಡೆ ಮಾಡಲಾಗಿದ್ದು, ಕರದಂಟು ನಗರಿ ಗೋಕಾಕ ಹಾಗೂ ಸುತ್ತಮುತ್ತಲಿನ ಗ್ರಾಮಗಳು ಪ್ರವಾಹ ಭೀತಿ ಎದುರಿಸುತ್ತಿವೆ.