ಮಲ್ಲಪ್ರಭಾ ನದಿ ಪ್ರವಾಹ; ಗೋವನಕೊಪ್ಪ ಗ್ರಾಮದ ಸೇತುವೆ ಕುಸಿತ - ಮಲ್ಲಪ್ರಭಾ ನದಿ

🎬 Watch Now: Feature Video

thumbnail

By

Published : Aug 10, 2019, 11:33 AM IST

ಬಾಗಲಕೋಟೆ: ಮಲ್ಲಪ್ರಭಾ ನದಿಯ ಪ್ರವಾಹದಿಂದ ಇತ್ತೀಚಿಗಷ್ಟೇ ನಿರ್ಮಿಸಲಾಗಿದ್ದ ಗೋವನಕೊಪ್ಪ ಗ್ರಾಮದ ಬಳಿ ಸೇತುವೆ ಸಂಪೂರ್ಣ ಕುಸಿದು ಹೋಗಿದೆ. ವಿಜಯಪುರ - ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 218 ಸೇತುವೆ ಕುಸಿದ ಪರಿಣಾಮ ಕಳೆದೆರಡು ದಿನಗಳಿಂದ ಸಂಚಾರ ಸ್ಥಗಿತಗೊಂಡಿದೆ. ಕುಳಗೇರಿ ಕ್ರಾಸ್ ಬಳಿಯಿದ್ದು, ಮಲ್ಲಪ್ರಭಾ ನದಿಯ ಪ್ರವಾಹದ ತೊಂದರೆಯನ್ನು ಸರಿ ಪಡಿಸಲು ಈ ಸೇತುವೆ ನಿರ್ಮಿಸಲಾಗಿತ್ತು.ಆದರೆ ಮತ್ತೆ ಪ್ರವಾಹದಲ್ಲಿಯೇ ಸಂಪೂರ್ಣ ಹಾನಿಗೊಂಡಿದ್ದು, ಇದಕ್ಕಾಗಿ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿಲಾಗಿತ್ತು. ಕಳಪೆ ಗುಣಮಟ್ಟದ ಕಾಮಗಾರಿ ಆಗಿರುವುದರಿಂದ ಸೇತುವೆ ನಾಶವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.