ರಾಗಿ ಮೆದೆಗೆ ತಗುಲಿದ ಬೆಂಕಿ; ಅಪಾರ ನಷ್ಟ! - fire
🎬 Watch Now: Feature Video

ರಾಮನಗರ: ರಾಗಿ ಮೆದೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮೇದೆ ಸಂಪೂರ್ಣ ಬೆಂಕಿಗಾಹುತಿಯಾಗಿರುವ ಘಟನೆ ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ನಂಜಾಪುರ ಗ್ರಾಮದ ಬಳಿ ನಡೆದಿದೆ. ಗ್ರಾಮದ ರೈತರ 6 ರಾಗಿ ಮೆದೆಗಳು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಬಳಿಕ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಇನ್ನೂ ಆಕಸ್ಮಿಕವಾಗಿ ಬೆಂಕಿ ತಗುಲಿದೆಯೋ ಅಥವಾ ದ್ವೇಷದಿಂದ ಮೆದೆಗೆ ಬೆಂಕಿ ಹಾಕಿದ್ದಾರೋ ಎಂಬುದು ತನಿಖೆ ಬಳಿಕವೇ ತಿಳಿಯಲಿದೆ.