ಕಡಲೆ ರಾಶಿಗೆ ಬೆಂಕಿ: ಸಂಪೂರ್ಣ ಬೆಳೆ ನಾಶ

🎬 Watch Now: Feature Video

thumbnail

By

Published : Feb 13, 2021, 1:13 PM IST

ರಾಯಚೂರು: ಕಡಲೆ ರಾಶಿಗೆ ಬೆಂಕಿ ಹೊತ್ತಿಸಿದರುವ ಘಟನೆ ರಾಯಚೂರು ತಾಲೂಕಿನ ಇಡಪನೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ನಾಗಲು ಕರೆ ಬಳಿ ಉಪ್ಪಾರ ಸಿದ್ದಮ್ಮ ಎನ್ನುವರ ಜಮೀನಿನಲ್ಲಿ ಈ ಘಟನೆ ನಡೆದಿದೆ. ಸುಮಾರು ಮೂರು ಎಕರೆ ಪ್ರದೇಶದಲ್ಲಿ ಕಡಲೆ ಬೆಳೆ ಬೆಳೆಯಲಾಗಿತ್ತು. ಬೆಳೆದ ಫಸಲು ಬಂದ ಬಳಿಕ ಕಟಾವ್ ಮಾಡಿ ರಾಶಿ ಮಾಡಲು ಸಂಗ್ರಹಿಸಿ ಇಡಲಾಗಿತ್ತು. ಆದ್ರೆ ಯಾರೋ ಕಿಡಿಗೇಡಿಗಳು ಈ ಕೃತ್ಯ ಎಸಗಿರಬಹುದು ಎನ್ನಲಾಗುತ್ತಿದೆ. ಕಡಲೆ ರಾಶಿಗೆ ಬೆಂಕಿ ಹತ್ತಿದ ಪರಿಣಾಮ ಬೆಳೆ ಸಂಪೂರ್ಣ ಹಾನಿಯಾಗಿದೆ. ಇಡಪನೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.