ನೇತ್ರಾವತಿ ಸೇತುವೆಯಲ್ಲಿ ಬೆಂಕಿ ಅವಘಢ: ವಾಹನ ಸವಾರರಲ್ಲಿ ಆತಂಕ - ನೇತ್ರವಾತಿ ಸೇತುವೆ ಅಗ್ನಿ ಅವಘಡ
🎬 Watch Now: Feature Video
ಉಳ್ಳಾಲ ಮತ್ತು ಮಂಗಳೂರು ಸಂಪರ್ಕಿಸುವ ನೇತ್ರಾವತಿ ಸೇತುವೆ ತಡೆಬೇಲಿ ಕಾಮಗಾರಿ ಸ್ಥಳದಲ್ಲಿದ್ದ ವೆಲ್ಡಿಂಗ್ ಮೆಷಿನ್ಗೆ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಹತ್ತಿ ಉರಿಯುತ್ತಿದ್ದು, ಸೇತುವೆ ಮೇಲೆ ಹಬ್ಬಿದ ದಟ್ಟ ಹೊಗೆ ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ. ಸುಸೈಡ್ ಸ್ಫಾಟ್ ಆಗಿದ್ದ ಸೇತುವೆಗೆ ತಡೆಬೇಲಿ ನಿರ್ಮಾಣ ಕಾಮಗಾರಿಗೆ ಇತ್ತೀಚೆಗೆ ಮಂಗಳೂರು ಶಾಸಕರು ಶಿಲಾನ್ಯಾಸ ನೆರವೇರಿಸಿದ್ದರು. ಸದ್ಯ ಸ್ಥಳಕ್ಕೆ ಕಂಕನಾಡಿ ಪೊಲೀಸರು ಆಗಮಿಸಿ ಬೆಂಕಿ ನಂದಿಸಲು ಸಹಕರಿಸಿದರು. ಇಲ್ಲಿ ಸತ್ತ ಹಲವಾರು ಜನರ ಅತೃಪ್ತ ಆತ್ಮಗಳು ಕಾಮಗಾರಿಗೆ ಅಡ್ಡಿಯಾಗುತ್ತಿವೆ ಎಂಬ ಮಾತುಗಳು ಕೂಡ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.