ದುಷ್ಕರ್ಮಿಗಳಿಂದ ಹುಲ್ಲಿನ ಬಣವೆಗೆ ಬೆಂಕಿ: ಅಪಾರ ನಷ್ಟ - Tumakuru
🎬 Watch Now: Feature Video
ತುಮಕೂರು: ದುಷ್ಕರ್ಮಿಗಳು 8 ಲೋಡ್ನಷ್ಟು ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿದ್ದು, ಅಪಾರ ನಷ್ಟ ಸಂಭವಿಸಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಕಾಮೇನಹಳ್ಳಿಯಲ್ಲಿ ನಡೆದಿದೆ. ಇವು ಕಾಮೇನಹಳ್ಳಿ ತಿಮ್ಮರಾಜು ಎಂಬುವವರಿಗೆ ಸೇರಿದ ಬಣವೆಗಳಾಗಿದ್ದು, ಕೊರಟಗೆರೆ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದರು. ಇನ್ನು ಬೆಂಕಿ ಇಟ್ಟು ಪರಾರಿಯಾಗಿದ್ದ ನಾಗರಾಜ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.