ಕಲಬುರಗಿ ಟೆಂಟ್ ಹೌಸ್ಗೆ ಬೆಂಕಿ:10 ಲಕ್ಷ ರೂ. ಮೌಲ್ಯದ ಸ್ವತ್ತು ಸುಟ್ಟು ಭಸ್ಮ - Kalaburagi Latest News update
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9975300-658-9975300-1608714552235.jpg)
ಕಲಬುರಗಿ: ಟೆಂಟ್ ಹೌಸ್ಗೆ ಬೆಂಕಿ ಬಿದ್ದು ಧಗಧಗನೆ ಹೊತ್ತಿ ಉರಿದು ಘಟನೆ ಜಿಲ್ಲೆಯ ಹಾಗರಗುಂಡಗಿ ಗ್ರಾಮದಲ್ಲಿ ಮಧ್ಯರಾತ್ರಿ ನಡೆದಿದೆ. ಗ್ರಾಮದ ಶರಣಗೌಡ ರಾಸಣಗಿ ಎಂಬುವರಿಗೆ ಸೇರಿದ ಟೆಂಟ್ ಹೌಸ್ ಇದಾಗಿದ್ದು, ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ, ಘಟನೆಯಲ್ಲಿ ಟೆಂಟ್ ಹೌಸ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಸುಮಾರು 10 ಲಕ್ಷ ರೂಪಾಯಿ ಮೌಲ್ಯದ 100 ಕುರ್ಚಿ, ಡಿಜೆ ಸಿಸ್ಟಮ್ಸ್, 30 ಶಾಮಿಯಾನ, ಮ್ಯಾಟ್ ಎಲ್ಲವೂ ಸುಟ್ಟು ಭಸ್ಮವಾಗಿವೆ. ಫರಹತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಕುಟುಂಬಕ್ಕೆ ಆಧಾರವಾಗಿದ್ದ ಟೆಂಟ್ ಹೌಸ್ ಕಳೆದುಕೊಂಡ ಶರಣಗೌಡ ಕಣ್ಣೀರಲ್ಲಿ ಮುಳುಗಿದ್ದಾನೆ.