ಹಣಕಾಸು ವಿಚಾರದಲ್ಲಿ ಮನಸ್ತಾಪ: ಚಪ್ಪಲಿಯಿಂದ ಹೊಡೆದಾಡಿಕೊಂಡ ಎರಡು ಕುಟುಂಬಗಳು - ಹಿಗ್ಗಾಮುಗ್ಗ ಥಳಿಸಿ ಮಹಿಳೆಯರು ಆಕ್ರೋಶ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8697603-43-8697603-1599367895979.jpg)
ಮೈಸೂರು: ಹಣಕಾಸು ವಿಚಾರದಲ್ಲಿ ಉಂಟಾದ ಮನಸ್ತಾಪದಿಂದ ಎರಡು ಕುಟುಂಬದವರು ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಂಡಿರುವ ಘಟನೆ ಮೈಸೂರು ಹೊರವಲಯದ ಇಂದಿರಾಗಾಂಧಿ ಬಡಾವಣೆಯ ಏಕಲವ್ಯ ನಗರದಲ್ಲಿ ನಡೆದಿದೆ. ಕುಟುಂಬಗಳ ವೈಮನಸ್ಸಿನಿಂದ ಚಿಕ್ಕರಂಗಪ್ಪ (38) ಎಂಬಾತನ ಮೇಲೆ ಮಹಿಳೆಯರೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದೆ. ಹಲ್ಲೆ ನಡೆಸಿದ ಕುಮಾರ್, ಬಸಪ್ಪ, ಸದಾನಂದ್, ಅಂಬಿಕ, ಎಲ್ಲಮ್ಮ ಇವರ ವಿರುದ್ಧ ಚಿಕ್ಕರಂಗಪ್ಪ ಅವರು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.