ಮದ್ಯಪ್ರಿಯರಿಗಿಂದು ಹಬ್ಬದ ವಾತಾವರಣ: ಬೆಳ್ಳಂಬೆಳಗ್ಗೆಯಿಂದಲೇ ಫುಲ್ ಟೈಟ್ - corona
🎬 Watch Now: Feature Video
ಕಳೆದು ಒಂದೂವರೆ ತಿಂಗಳಿಂದ ಎಣ್ಣೆಯಿಲ್ಲದೇ ಪರಿತಪಿಸುತ್ತಿದ್ದ ಮನಸ್ಸುಗಳಿಗೆ ಇದೀಗ ಸರ್ಕಾರ ಮದ್ಯ ನೀಡಿದ್ದು, ಮೊದಲ ದಿನವೇ ವ್ಯಕ್ತಿಯೋರ್ವ ಕಂಠಪೂರ್ತಿ ಕುಡಿದು ಫುಟ್ ಪಾತ್ ಮೇಲೆ ಮಲಗಿರುವ ಘಟನೆ ಬೆಳಗಾವಿಯ ಮಹಾಂತೇಶ ನಗರದಲ್ಲಿ ನಡೆದಿದೆ. ನಗರದ ರಾಮದೇವ ವೃತದಲ್ಲಿ ಸರದಿ ಸಾಲಿನಲ್ಲಿ ನಿಂತು ಮದ್ಯ ಖರೀದಿಸಿದ್ದ ಈ ವ್ಯಕ್ತಿ, ಬಳಿಕ ಅಲ್ಲೇ ಪಕ್ಕದಲ್ಲಿ ಕುಳಿತು ಕಂಠಪೂರ್ತಿ ಕುಡಿದು, ಮನೆಗೆ ಹೋಗಲಾಗದೇ ರಸ್ತೆ ಪಕ್ಕವೇ ಬಿದ್ದಿದ್ದಾನೆ. ಇದನ್ನು ನೋಡಿದ ಸಾರ್ವಜನಿಕರು, ಬೆಳಗ್ಗೆಯೇ ಹೀಗಾದರೆ, ಸಂಜೆ ಹೊತ್ತಿಗಿನ ಪರಿಸ್ಥಿತಿ ಏನಾಗಬಹುದೋ ಎಂದು ಯೋಚಿಸುತ್ತಿದ್ದಾರೆ.
Last Updated : May 4, 2020, 3:50 PM IST