ಮುಖ್ಯಮಂತ್ರಿ ಬಿಎಸ್ವೈ ನಿವಾಸಕ್ಕೆ ಕೆಪಿಸಿಸಿ ಕಿಸಾನ್ ಘಟಕ ಮುತ್ತಿಗೆ - ಕೆಪಿಸಿಸಿ ರೈತ ಘಟಕ ಪ್ರತಿಭಟನೆ
🎬 Watch Now: Feature Video
ರಾಜ್ಯ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಕೆಪಿಸಿಸಿ ಕಿಸಾನ್ ಘಟಕದ ಕಾರ್ಯಕರ್ತರು ಮುಖ್ಯಮಂತ್ರಿ ಅವರ ಅಧಿಕೃತ ನಿವಾಸ ಕಾವೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ ನೇತೃತ್ವದಲ್ಲಿ ಆಗಮಿಸಿದ 30 ಕ್ಕೂಅಧಿಕ ರೈತರು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಿದರು. ಕಾವೇರಿ ನಿವಾಸದ ಮುಂಭಾಗದಲ್ಲಿ ಕಾರ್ಯಕರ್ತರನ್ನು ತಡೆದ ಪೊಲೀಸರು ಸಿಎಂ ನಿವಾಸ ಪ್ರವೇಶಕ್ಕೆ ಅನುಮತಿ ನಿರಾಕರಿಸಿದರು. ನಂತರ ಸಂಜೆ ಸಭೆ ನಡೆಸಿ ಸಮಸ್ಯೆ ಆಲಿಸುವ ಸಂದೇಶವನ್ನು ಸಿಎಂ ಕಳುಹಿಸಿಕೊಟ್ಟಿದ್ದರಿಂದ ಮುತ್ತಿಗೆ ಕೈಬಿಡಲಾಯಿತು. ಈ ವೇಳೆ ಈಟಿವಿ ಭಾರತದೊಂದಿಗೆ ಸಚಿನ್ ಮೀಗಾ ಮಾತನಾಡಿದರು.