ಬಂಪರ್ ಬೆಳೆ ನಿರೀಕ್ಷೆಯಲ್ಲಿದ್ದ ರೈತರ ಸ್ಥಿತಿ ಪಾಪರ್... ಕಳಪೆ ಬೀಜ ಕೊಂಡು ಕೈ ಸುಟ್ಟುಕೊಂಡ ರೈತರು! - ಚಾಮರಾಜನಗರ ಲೆಟೆಸ್ಟ್ ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5148229-thumbnail-3x2-jaragijpg.jpg)
ಚಾಮರಾಜನಗರ: ಈ ಬಾರಿ ರಾಜ್ಯದ್ಯಂತ ಉತ್ತಮ ಮಳೆಯಾಗಿದ್ದು, ಜಿಲ್ಲೆಯ ಬಹುಪಾಲು ರೈತರು ಉತ್ತಮ ಬೆಳೆ ತೆಗೆಯುತ್ತಿದ್ದಾರೆ. ಆದರೆ ಹೆಚ್ಚಿನ ಇಳುವರಿ ಪಡೆಯುವ ಆಸೆಯಿಂದ ಮಾರ್ವೆಲ್ ಎಂಬ ಕಂಪನಿಯ ಬಿತ್ತನೆ ಬೀಜಗಳನ್ನು ಬಿತ್ತನೆ ಮಾಡಿದ್ದ ರೈತರು ಕೈ ಸುಟ್ಟುಕೊಂಡಿದ್ದಾರೆ. ತಾಲೂಕಿನ ಬಹುಪಾಲು ರೈತರು ಉತ್ತಮ ಬೆಳೆ ಪಡೆಯುತ್ತಿದ್ದು, ತಾಲೂಕಿನ ಮೂಕನಪಾಲ್ಯ, ವೀರಯ್ಯನಪುರ ಗ್ರಾಮದ ರೈತರಿಗೆ ದಿಕ್ಕೆ ತೋಚದ ಸ್ಥಿತಿ ನಿರ್ಮಾಣವಾಗಿದೆ. ಹೆಚ್ಚಿನ ಇಳುವರಿ ಬರುವ ನಿರೀಕ್ಷೆಯಿಂದ
ಈ ರೈತರು ಮಾರ್ವೆಲ್ ಎಂಬ ಕಂಪನಿಯ ಮುಸುಕಿನಜೋಳ ಬಿತ್ತನೆ ಮಾಡಿ ರೈತರು ಕೈ ಸುಟ್ಟುಕೊಂಡಿದ್ದು, ಬೆಳೆಯೆ ಬರದೆ ಚಿಂತೆ ಗೀಡಾಗಿದ್ದಾರೆ.