ಬಣವೆಗೆ ಹತ್ತಿದ್ದ ಬೆಂಕಿ ನಂದಿಸಲು ಹೋರಾಡಿದ ರೈತ ಮಹಿಳೆ! - ಜೋಳದ ಬಣವೆಗೆ ಸಿಡಿಲು ಬಡಿದು ಸುಟ್ಟು ಭಸ್ಮ
🎬 Watch Now: Feature Video
ಮುದ್ದೇಬಿಹಾಳ (ವಿಜಯಪುರ): ತಾಲೂಕಿನ ಕೇಸಾಪೂರ ಗ್ರಾಮದಲ್ಲಿ ಜಮೀನಿನಲ್ಲಿದ್ದ ಜೋಳದ ಬಣವೆಗೆ ಸಿಡಿಲು ಬಡಿದು ಸುಟ್ಟು ಭಸ್ಮವಾದ ಘಟನೆ ಬುಧವಾರ ಸಂಜೆ ನಡೆದಿದೆ. ಗ್ರಾಮದ ಮಲಕಾಜಪ್ಪ ಹಡಪದ ಎಂಬುವರಿಗೆ ಸೇರಿದ್ದ ಈ ಬಣವೆಗೆ ಸಿಡಿಲಿನ ಝಳ ತಾಗಿ ಬೆಂಕಿ ಹೊತ್ತಿಕೊಂಡಿದೆ. ವಿಷಯ ತಿಳಿಯುತ್ತಿದ್ದಂತೆ ರೈತನ ಕುಟುಂಬದವರು ಜಮೀನಿಗೆ ತೆರಳಿ ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ರೈತ ಮಹಿಳೆ ಹಾಗೂ ಅವರ ಕುಟುಂಬದ ಸದಸ್ಯರೊಬ್ಬರು ಜಮೀನಿನಲ್ಲಿದ್ದ ಮಣ್ಣು ಹಾಕಿ ಬೆಂಕಿ ಹೊತ್ತಿದ್ದ ಬಣವೆಯನ್ನು ನಂದಿಸಲು ಹೋರಾಟ ನಡೆಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅಗ್ನಿಶಾಮಕ ಠಾಣೆಗೆ ಕರೆ ಮಾಡಿದರೂ ಅದು ಕೇಸಾಪೂರ ಗ್ರಾಮ ತಲುಪುವುದರಷ್ಟರಲ್ಲಿಯೇ ಸುಟ್ಟು ಭಸ್ಮವಾಗಿರುತ್ತಿದ್ದ ಕಾರಣ ರೈತನ ಕುಟುಂಬದವರಾಗಲೀ, ಗ್ರಾಮಸ್ಥರಾಗಲೀ ಅವರಿಗೆ ಮಾಹಿತಿ ನೀಡಲು ಹೋಗಿಲ್ಲ. ಪ್ರಕೃತಿ ವಿಕೋಪದಡಿ ಪರಿಹಾರ ನೀಡಬೇಕು ಎಂದು ಕೇಸಾಪೂರದ ಗದ್ದೆಪ್ಪ ಬೋವೇರ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.