ಹೆಚ್.ಡಿ. ಕೋಟೆ ತಾಲೂಕಿನಲ್ಲಿ ಕಾಡಾನೆ ದಾಳಿಗೆ ರೈತ ಬಲಿ - ಕಾಡಾನೆ ದಾಳಿಯಿಂದ ರೈತ ಬಲಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9703396-thumbnail-3x2-bng.jpg)
ಮೈಸೂರು: ಜಮೀನಿಗೆ ತೆರಳುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ನಡೆದಿದೆ. ನೆಮ್ಮನಹಳ್ಳಿ ಗ್ರಾಮದ ಯೋಗೇಶ್ ಆನೆ ದಾಳಿಗೆ ಬಲಿಯಾಗಿರುವ ರೈತ. ಈತ ಜಮೀನಿನಲ್ಲಿ ಶುಂಠಿ ಬೆಳೆ ನೋಡಲು ತೆರಳುತ್ತಿದ್ದ. ಈ ವೇಳೆ ದಾಳಿ ನಡೆಸಿ ಕಾಡಾನೆ ಆತನನ್ನು ತುಳಿದು ಸಾಯಿಸಿದೆ. ಸ್ಥಳಕ್ಕೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಅರಣ್ಯ ವ್ಯಾಪ್ತಿಯ ಮೊಳೆಯೂರು ಉಪವಲಯ ಪ್ರದೇಶದಲ್ಲಿರುವ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಸ್ಥರ ಸಹಾಯದಿಂದ ಆನೆಯನ್ನು ಕಾಡಿಗಟ್ಟಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.