ಮಳೆ ತಾಂಡವ... ಪ್ರವಾಹಕ್ಕೆ ಸಿಲುಕಿ ನಾಪತ್ತೆಯಾಗಿದ್ದ ರೈತ ಶವವಾಗಿ ಪತ್ತೆ - ಕೇಂದ್ರ ಸಚಿವ ಪ್ರಲ್ಹಾದ ಜೋಶಿ
🎬 Watch Now: Feature Video
ಧಾರವಾಡ: ತಾಲೂಕಿನ ಕಲ್ಲಾಪುರದ ಹಳ್ಳದಲ್ಲಿ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದ ರೈತ ಶವವಾಗಿ ಪತ್ತೆಯಾಗಿದ್ದಾನೆ. ಕಲ್ಲಾಪುರ ಗ್ರಾಮದ ಬಸಪ್ಪ ಪಾಟೀಲ (54) ಹಳ್ಳದ ಪ್ರವಾಹಕ್ಕೆ ನಾಪತ್ತೆಯಾಗಿದ್ದ ರೈತ. ಈತ ಪ್ರವಾಹಕ್ಕೆ ಸಿಲುಕಿ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ. ಹೊಲದಿಂದ ಹಿಂದಿರುಗಿ ಬರುವಾಗ ಕಲ್ಲಾಪುರ-ವೀರಾಪುರ ಮಧ್ಯದ ಹಳ್ಳದಲ್ಲಿ ಪ್ರವಾಹ ಬಂದಿದ್ದರಿಂದ ನೀರಿನಲ್ಲಿ ಕೊಚ್ಚಿ ಹೋಗಿದ್ದ. ಸದ್ಯ ರೈತನ ಮೃತದೇಹ ಪತ್ತೆಯಾಗಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರೈತನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.