ಮಳೆಗೆ ಬಾದಾಮಿ ಬಳಿ ಸೃಷ್ಟಿಯಾಯ್ತು ಜಲಧಾರೆ;ಫಾಲ್ಸ್ ಕಣ್ತುಂಬಿಕೊಳ್ಳುತ್ತಿರೋ ಜನತೆ - undefined
🎬 Watch Now: Feature Video
ಬಾಗಲಕೋಟೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಬಾದಾಮಿ ತಾಲೂಕಿನ ಬಿ. ಎನ್. ಜಾಲಿಹಾಳ ಗ್ರಾಮದ ಬಳಿರುವ ಹುಲಗೇಮ್ಮ ಕೊಳ್ಳದಲ್ಲಿ ಸೃಷ್ಟಿಯಾಗಿರುವ ಜಲಪಾತ ನೋಡುಗರ ಕಣ್ಮನ ಸೆಳೆಯುತ್ತಿದೆ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಈ ಸ್ಥಳದಲ್ಲಿ, ಸುಮಾರು ನೂರು ಅಡಿಗಳಿಗಿಂತಲೂ ಎತ್ತರದ ಬೆಟ್ಟದ ಮೇಲಿಂದ ನೀರು ಬೀಳುತ್ತಿದೆ. ಹೀಗಾಗಿ ವಿವಿಧ ಪ್ರದೇಶಗಳಿಂದ ಫಾಲ್ಸ್ ನೋಡಲು ಜನರು ಆಗಮಿಸುತ್ತಿದ್ದು, ಪ್ರಕೃತಿಯ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.