ನಮ್ಮಲ್ಲಿ ಮಾಡಿದ ತಪ್ಪು, ಭಾರತದಲ್ಲಾಗುವುದು ಬೇಡ: ಇಟಲಿ ಕನ್ನಡಿಗನ ಕಣ್ಣೀರ ನುಡಿ - ಹೇಮೇಗೌಡ ಮಧು ಸಂದರ್ಶನ
🎬 Watch Now: Feature Video
ಕೊರೊನಾ ವೈರಸ್‌ಗೆ ಇಟಲಿ ತತ್ತರಿಸಿ ಹೋಗಿದೆ. ಇಲ್ಲಿ ಈಗಾಗಲೇ 27 ಸಾವಿರ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಹೆಮ್ಮಾರಿಯಿಂದ ಹೊರಬರಲು ಆ ದೇಶ ಶತಾಯಗತಾಯ ಹೋರಾಡುತ್ತಿದೆ. ನಮ್ಮ ರಾಜ್ಯದ ಚಿಕ್ಕಮಗಳೂರಿನ ಹೇಮೇಗೌಡ ಮಧು ಶುಶ್ರೂಷಕನಾಗಿ ಇಟಲಿಯಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇವರು ವೈದ್ಯಕೀಯ ಸಿಬ್ಬಂದಿ ಮಾತ್ರವಲ್ಲದೆ ಇಟಲಿಯ ಉತ್ತರ ಭಾಗದಲ್ಲಿರುವ ಮಿಲನ್ ನಗರದ ಕನ್ನಡ ಸಂಘಟನೆಯ ಅಧ್ಯಕ್ಷರೂ ಹೌದು. ಇಲ್ಲಿನ ಸದ್ಯದ ಪರಿಸ್ಥಿತಿ, ಲಾಕ್ಡೌನ್ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ್ದಾರೆ. ಈ ಕಿರು ಸಂದರ್ಶನದ ತುಣುಕು ಇಲ್ಲಿದೆ.
Last Updated : May 1, 2020, 2:40 PM IST