ಕಲಘಟಗಿ: ಗಜಪಡೆ ಹಾವಳಿಗೆ ಬೆಳೆಗಳು ನಾಶ, ಕಂಗಾಲಾದ ರೈತರು - elephants
🎬 Watch Now: Feature Video
ಹುಬ್ಬಳ್ಳಿ: ಆನೆಗಳ ಹಾವಳಿಗೆ ಕಲಘಟಗಿ ತಾಲೂಕಿನ ರೈತರು ಕಂಗಾಲಾಗಿದ್ದಾರೆ. ಕಳೆದ ಒಂದು ವಾರದಿಂದ ಇಲ್ಲೇ ಬೀಡು ಬಿಟ್ಟಿರುವ ಆನೆಗಳು ಅನ್ನದಾತರಿಗೆ ಕಣ್ಣೀರು ತರಿಸಿವೆ. ಬೀರವಳ್ಳಿ ಗ್ರಾಮದ ಸುತ್ತಮುತ್ತ ಠಿಕಾಣಿ ಹೂಡಿರುವ ಆನೆಗಳ ಹಿಂಡು ರೈತರ ಬೆಳೆಗಳನ್ನು ನಾಶಗೊಳಿಸುತ್ತಿವೆ. ಸುಮಾರು 6-7 ಆನೆಗಳಿದ್ದು, ಡ್ರೋನ್ ಕ್ಯಾಮರಾದಲ್ಲಿ ಆನೆಗಳ ದೃಶ್ಯ ಸೆರೆಯಾಗಿದೆ. ಹೊಲಗಳಿಗೆ ನುಗ್ಗಿ ಕಬ್ಬು, ಭತ್ತ, ತೊಗರಿ, ಮೆಕ್ಕೆಜೋಳವನ್ನು ನಾಶ ಮಾಡುತ್ತಿವೆ. ಸದ್ಯ ಅರಣ್ಯ ಇಲಾಖೆ ಅಧಿಕಾರಿಗಳು ಗಜ ಪಡೆಯನ್ನು ವಾಪಸ್ ಕಾಡಿಗೆ ಅಟ್ಟಲು ಹರಸಾಹಸ ಪಡುತ್ತಿದ್ದಾರೆ.