ಮನೆ ಸುತ್ತಲೂ ರಾತ್ರಿ ಕಾಡಾನೆ ಓಡಾಟ: ಭಯಭೀತರಾದ ಸ್ಥಳೀಯರು..! - wild elephant Detect
🎬 Watch Now: Feature Video
ಕುಶಾಲನಗರ (ಕೊಡಗು): ಗ್ರಾಮದಲ್ಲಿ ರಾತ್ರಿ ಕಾಡಾನೆಯೊಂದು ತಿರುಗಾಡುತ್ತಿರುವ ದೃಶ್ಯಗಳು ಕುಶಾಲನಗರ ಸಮೀಪದ ಗೊಂದಿ ಬಸವನಹಳ್ಳಿ ಗ್ರಾಮದಲ್ಲಿ ಕಂಡು ಬಂದಿವೆ. ರಾತ್ರಿ ಗ್ರಾಮದಲ್ಲಿ ಮನೆ ಮುಂದೆ ಮೂರು ಸುತ್ತು ಓಡಾಡಿರುವ ಕಾಡಾನೆ ಮನೆಯ ಗೇಟ್ ಹಿಡಿದು ಅಲುಗಾಡಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಅತ್ತೂರು ಅರಣ್ಯದಿಂದ ಊರಿಗೆ ಬಂದಿರುವ ಕಾಡಾನೆಯನ್ನು ಕಂಡು ಗ್ರಾಮಸ್ಥರು ಭಯ ಭೀತರಾಗಿದ್ದಾರೆ.