ಮತ್ತೆ ಮತ್ತೆ ಗ್ರಾಮಗಳತ್ತ ಸುಳಿಯುತ್ತಿರುವ ಗಜಪಡೆ: ಗ್ರಾಮಸ್ಥರಲ್ಲಿ ಆತಂಕ - Elephant herds apeard anekal
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9855864-thumbnail-3x2-vid.jpg)
ಆನೇಕಲ್: ಇದೀಗ ಮುಂಗಾರಿನಲ್ಲಿ ಬಿತ್ತನೆ ಮಾಡಿದ ರಾಗಿಯ ಮೊದಲ ಕೊಯ್ಲು ಮುಗಿಯುತ್ತಾ ಬಂದಿದ್ದು, ರಾಗಿ ಬಣವೆಗಳು ರಾಗಿ ಹೊಲದಲ್ಲಿ ಎದ್ದಿವೆ. ವಾಡಿಕೆಯಂತೆ ಆನೇಕಲ್-ತಮಿಳುನಾಡಿನ ಹೊಸೂರು ಗಡಿಯಲ್ಲಿ ಆನೆಗಳ ಹಿಂಡು ಕಾಣಿಸಿಕೊಳ್ಳುವುದು ಈ ಕಾಲದಲ್ಲಿ ಸಹಜವಾದ್ದರಿಂದ ಇಂದು ಆನೆಗಳ ಹಿಂಡು ಗ್ರಾಮಸ್ಥರ ಕಣ್ಣಿಗೆ ಬಿದ್ದಿವೆ. ಅಲ್ಲದೆ ಹಿಂಡು ಹಿಂಡಾಗಿ ಬಂದ ಆನೆಯ ದೈತ್ಯ ಪಡೆ ಕಂಡು ಹಸು-ಕುರಿ ಹೆದರಿವೆ. ಹಿಂಡನ್ನು ಕಾಡಿನತ್ತ ಕಳಿಸಲು ಎರಡೂ ರಾಜ್ಯಗಳ ಅರಣ್ಯಾಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ತಮಿಳುನಾಡಿನ ಉದ್ದನಪಲ್ಲಿ ಹಾಗೂ ಆನೇಕಲ್ ಕಾಡಂಚಿನ ಭಾಗಗಳಲ್ಲಿ ಗಜಪಡೆಯನ್ನು ಗ್ರಾಮಸ್ಥರ ಮೇಲೆರಗದಂತೆ ಕಾಡಿಗಟ್ಟುವ ಸಾಹಸಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.