ಮೈಸೂರಿನಲ್ಲಿ ಆನೆ ಹಾವಳಿ... ಕಾಡಿಗಟ್ಟಲು ಜನರ ಹರಸಾಹಸ - elephant attack latest news
🎬 Watch Now: Feature Video
ಮೈಸೂರಿನಲ್ಲಿ ಜಮೀನೊಂದಕ್ಕೆ ನುಗ್ಗಿ ಬೆಳೆ ತಿಂದು ತೇಗಿದ ಆನೆಯನ್ನು ಕಾಡಿಗಟ್ಟಲು ಗ್ರಾಮಸ್ಥರು ಹರಸಾಹಸ ಪಟ್ಟಿದ್ದಾರೆ. ಸರಗೂರು ತಾಲೂಕಿನ ಹೆಗ್ಗೂಡಿಲು ಗ್ರಾಮದ ಜಮೀನಿಗೆ ನುಗು ಜಲಾಶಯದ ಹಿನ್ನೀರಿನ ಪ್ರದೇಶದಿಂದ ಕಾಡಾನೆ ನುಗ್ಗಿದ್ದು, ಸೊಂಪಾಗಿ ಬೆಳೆದಿದ್ದ ರಾಗಿ ಬೆಳೆಯನ್ನು ತಿಂದು ಬಳಿಕ ಫಸಲನ್ನು ತುಳಿದು ಹಾನಿ ಮಾಡಿ ಜಮೀನಿನಲ್ಲಿಯೇ ಗಂಟೆಗಟ್ಟಲೇ ನಿಂತುಕೊಂಡಿದೆ. ಆನೆಯನ್ನು ಕಾಡಿಗೆ ಅಟ್ಟಲು ಅರಣ್ಯಾಧಿಕಾರಿಗಳ ಗಮನಕ್ಕೆ ತಂದಾಗ, ವಾಚರ್ ಅನ್ನು ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದಾರೆ. ಆನೆ ಓಡಿಸಲು ಗನ್ ತೆಗೆದುಕೊಂಡು ಬಾರದೇ ಬರಿಗೈಯಲ್ಲಿ ಬಂದ ವಾಚರ್ಅನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಹರಸಾಹಸ ಪಟ್ಟು ಆನೆಯನ್ನು ಕಾಡಿಗೆ ಅಟ್ಟಿದ್ದಾರೆ.