ಮೂಡಿಗೆರೆ ತಾಲೂಕಿನಲ್ಲಿ ಒಂಟಿ ಸಲಗದ ಓಡಾಟ: ಮನೆಯಿಂದ ಹೊರಬರದ ಜನ - ದೇವರಮನೆ, ಕೋಟೆಗುಡ್ಡ, ಕೋಗಿಲೆ ಗ್ರಾಮದ ಸುತ್ತಮುತ್ತ ಆನೆಕಾಟ

🎬 Watch Now: Feature Video

thumbnail

By

Published : Feb 6, 2020, 7:19 PM IST

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಸ್ಥಳೀಯರು ಹಾಗೂ ಗ್ರಾಮಸ್ಥರು ಈ ಕಾಡಾನೆಗಳ ಹಾವಳಿಯಿಂದ ಹೈರಾಣಾಗಿ ಹೋಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರಮನೆ, ಕೋಟೆಗುಡ್ಡ, ಕೋಗಿಲೆ ಗ್ರಾಮದ ಸುತ್ತಮುತ್ತ ಒಂಟಿ ಸಲಗದ ಓಡಾಟ ಹೆಚ್ಚಾಗಿದೆ. ಕಳೆದ ನಾಲ್ಕು ದಿನಗಳಿಂದ ಈ ಭಾಗದಲ್ಲಿ ಒಂಟಿ ಸಲಗ ಬೀಡು ಬಿಟ್ಟು ಗ್ರಾಮಸ್ಥರ ನಿದ್ದೆಗೆಡಿಸಿದೆ. ಈ ಒಂಟಿ ಸಲಗದಿಂದ ಗ್ರಾಮಸ್ಥರು ಮನೆಯಿಂದ ಹಾಗೂ ರಸ್ತೆಯಲ್ಲಿ ಸಂಚಾರ ಮಾಡೋದಕ್ಕೆ ಭಯ ಪಡುವಂತಹ ವಾತಾವರಣ ನಿರ್ಮಾಣವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.