ಚಿಕ್ಕಮಗಳೂರು: ಕ್ಲಬ್ಗೆ ನುಗ್ಗಿದ ಒಂಟಿ ಸಲಗ, ವಿಡಿಯೋ ನೋಡಿ.. - ಅದೃಷ್ಟವಶಾತ್ ಕಾಡಾನೆ ಯಾರಿಗೂ ತೊಂದರೆ ನೀಡದೆ
🎬 Watch Now: Feature Video

ಚಿಕ್ಕಮಗಳೂರು: ಬಾಳೆಹೊನ್ನೂರು ರಸ್ತೆಯ ಅರೆಹಳ್ಳಿಯಲ್ಲಿರುವ ಕ್ಲಬ್ ಒಂದಕ್ಕೆ ಒಂಟಿ ಸಲಗ ಬಂದಿದೆ. ಈ ಒಂಟಿ ಸಲಗವನ್ನು ನೋಡಿ ಕ್ಲಬ್ನಲ್ಲಿದ್ದ ಜನ ಬೆಚ್ಚಿ ಬಿದ್ದಿದ್ದು, ಈ ಕಾಡಾನೆಯ ಚಲನವಲನಗಳನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. 30 ನಿಮಿಷಕ್ಕೂ ಅಧಿಕ ಕಾಲ ಕ್ಲಬ್ ಆವರಣದಲ್ಲಿದ್ದ ಕಾಡಾನೆ, ಯಾರಿಗೂ ತೊಂದರೆ ನೀಡದೆ ತನ್ನ ಪಾಡಿಗೆ ತಾನು ಹೊರ ನಡೆದಿದೆ.