ಮಲೆನಾಡ ಹೆಬ್ಬಾಗಿಲಲ್ಲಿ ಕೊರೊನಾದಿಂದ ಕಳೆ ಕುಂದಿದ ಗಣೇಶೋತ್ಸವ - corona effect on ganesha festival
🎬 Watch Now: Feature Video
ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾದಿಂದ ಗಣೇಶ ಹಬ್ಬ ಸಂಪೂರ್ಣವಾಗಿ ಕಳೆ ಕುಂದಿದೆ. ಹಬ್ಬವನ್ನು ಸರಳವಾಗಿ ಅಚರಿಸಬೇಕೆಂಬ ಸರ್ಕಾರದ ಆದೇಶವಿರುವ ಕಾರಣ ಗಲ್ಲಿಗಳಲ್ಲಿ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶ ನೀಡಿಲ್ಲ. ಇದರಿಂದ ಎಲ್ಲಾ ರೀತಿಯ ವ್ಯಾಪಾರಗಳೂ ಡಲ್ ಆಗಿವೆ. ಶಿವಪ್ಪ ನಾಯಕ ಹೂವಿನ ಮಾರುಕಟ್ಟೆ ಸೇರಿದಂತೆ ಗಾಂಧಿ ಬಜಾರ್‌ನಲ್ಲೂ ವ್ಯಾಪಾರ-ವಹಿವಾಟು ಇಲ್ಲದೆ ಮಾರುಕಟ್ಟೆಗಳು ಭಣಗುಡುತ್ತಿದ್ದವು. ಚಿತ್ರದುರ್ಗ, ತುಮಕೂರು, ಬೆಂಗಳೂರುಗಳಿಂದ ಹೂವು ತಂದಿರುವ ವ್ಯಾಪಾರಸ್ಥರು ಪರದಾಡುವಂತಾಗಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿನ ಸ್ಥಿತಿಗತಿ ಕುರಿತು ನಮ್ಮ ಪ್ರತಿನಿಧಿ ಪ್ರತ್ಯಕ್ಷ ವರದಿ ನೀಡಿದ್ದಾರೆ.