ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಸಚಿವ ಸುರೇಶ್ ಕುಮಾರ್ - ಶಾಲಾ- ಕಾಲೇಜುಗಳು ಆರಂಭ ಹಿನ್ನೆಲೆ
🎬 Watch Now: Feature Video
ಆನೇಕಲ್: ಶಾಲಾ- ಕಾಲೇಜುಗಳು ಆರಂಭವಾಗಿದ್ದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ತಾಲೂಕಿನ ಆಯ್ದ ನಾಲ್ಕೈದು ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಬೆಳಗ್ಗೆ ಹೆಬ್ಬಗೋಡಿ, ಹೆನ್ನಾಗರ, ಚಂದಾಪುರ, ಅತ್ತಿಬೆಲೆ, ದೊಮ್ಮಸಂದ್ರ ಶಾಲೆಗಳಿಗೆ ಭೇಟಿ ನೀಡಿ, ಶಾಲಾ ಮಕ್ಕಳಿಗೆ ಪೂರ್ವಭಾವಿಯಾಗಿ ಕೊರೊನಾ ತಪಾಸಣೆ, ಕಡ್ಡಾಯ ಮಾಸ್ಕ್, ತರಗತಿಗಳಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಕೈಗೊಂಡ ಮುಂಜಾಗ್ರತೆ ಕ್ರಮಗಳನ್ನು ಪರಿಶೀಲಿಸಿದರು. ಕೆಲವೆಡೆ ಶಾಲಾ ಮಕ್ಕಳಿಗೆ ಸಿಹಿ ಹಂಚಿ ಶಾಲೆಗೆ ನಿರಂತರವಾಗಿ ಬರುವಂತೆ ಪ್ರೋತ್ಸಾಹಿಸಿದರು.