ತುಮಕೂರಿನಲ್ಲಿ ಗ್ರಹಣ ಗೋಚರ: ಖಗೋಳ ವೈಚಿತ್ರ್ಯ ಕಣ್ತುಂಬಿಕೊಡ ಸಾರ್ವಜನಿಕರು - ತುಮಕೂರು ವಿಜ್ಞಾನ ಕೇಂದ್ರದಲ್ಲಿ ಗ್ರಹಣ ವೀಕ್ಷಣೆ
🎬 Watch Now: Feature Video
ತುಮಕೂರು: ನಗರದ ವಿಜ್ಞಾನ ಕೇಂದ್ರದಲ್ಲಿ ಸೋಲಾರ್ ಫಿಲ್ಟರ್ ಬಳಸಿ ಸುರಕ್ಷಿತ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 10 ಗಂಟೆಯಿಂದ ವಿಜ್ಞಾನ ಕೇಂದ್ರದ ಬಳಿ ಸೂರ್ಯಗ್ರಹಣ ವೀಕ್ಷಣೆಗೆ ಸಾರ್ವಜನಿಕರು ಸೇರಿದ್ದರು. ಕೊರೊನಾ ಭೀತಿ ನಡುವೆಯೂ ಸಾಮಾಜಿಕ ಅಂತರ ಕಾಪಾಡಿಕೊಂಡು ಮಕ್ಕಳು, ವೃದ್ಧರು ಸೂರ್ಯ ಗ್ರಹಣ ವೀಕ್ಷಿಸಿದರು. ಇದಕ್ಕೂ ಮುನ್ನ ವೈಜ್ಞಾನಿಕ ದೃಷ್ಟಿಯಿಂದ ಗ್ರಹಣದ ಕುರಿತು ವಿಷಯ ತಜ್ಞರು ಸಾರ್ವಜನಿಕರಿಗೆ ಮಾಹಿತಿ ನೀಡಿದರು.