ಬಾಯಲ್ಲಿ ನೀರೂರಿಸುವ ದಸರಾ ಆಹಾರ ಮೇಳಕ್ಕೆ ಚಾಲನೆ - ಬಾಯಲ್ಲಿ ನೀರೂರಿಸುವ ಆಹಾರ
🎬 Watch Now: Feature Video

ಮೈಸೂರು: ದಸರಾ ಪ್ರಯುಕ್ತ ನಗರದ ಭಾರತ್ ಸ್ಕೌಟ್ಸ್ ಹಾಗೂ ಗೈಡ್ಸ್ ಮೈದಾನದಲ್ಲಿ ಆಯೋಜಿಸಿರುವ ದಸರಾ ಆಹಾರ ಮೇಳಕ್ಕೆ ಭಾನುವಾರ ಚಾಲನೆ ದೊರೆಯಿತು. ಇಲ್ಲಿ ಬಗೆ ಬಗೆಯ ಭಕ್ಷಗಳು ಆಹಾರ ಪ್ರಿಯರನ್ನು ಕೈ ಬೀಸಿ ಕರೆಯುತ್ತಿದ್ದು, ಕಡಿಮೆ ದರದಲ್ಲಿ ತಿಂಡಿ-ತಿನಿಸುಗಳು ದೊರೆಯಲಿವೆ. ಜಾನಪದ ಕಲಾ ತಂಡಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರನ್ನು ಬರಮಾಡಿಕೊಳ್ಳಲಾಯಿತು. ವೇದಿಕೆಗೆ ಆಗಮಿಸಿದ ಅವರು ಮೇಳಕ್ಕೆ ಚಾಲನೆ ನೀಡಿದರು.