ಆನೆಗೊಂದಿಯಲ್ಲಿ ದುರ್ಗಾದೇವಿಯ ಅದ್ಧೂರಿ ಜಂಬೂ ಸವಾರಿ - ಮೇಗೋಟೆಯ ದುರ್ಗಾದೇವಿ ದೇವಸ್ಥಾನ
🎬 Watch Now: Feature Video
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಐತಿಹಾಸಿಕ, ಪೌರಾಣಿಕ ಪ್ರವಾಸಿ ತಾಣವಾಗಿರುವ ಆನೆಗೊಂದಿಯಲ್ಲಿ ದುರ್ಗಾದೇವಿಯ ಜಂಬೂ ಸವಾರಿ ಅದ್ಧೂರಿಯಾಗಿ ನೆರವೇರಿತು. ಮೇಗೋಟೆಯ ದುರ್ಗಾದೇವಿ ದೇವಸ್ಥಾನದಿಂದ ಜಂಬೂ ಸವಾರಿ ಮೆರವಣಿಗೆ ಆರಂಭವಾಗಿ ಆನೆಗೊಂದಿ ಗ್ರಾಮದ ಶ್ರೀರಂಗನಾಥ ದೇವಸ್ಥಾನವರೆಗೆ ಸಾಗಿ ಪುನಃ ದುರ್ಗಾ ದೇವಸ್ಥಾನಕ್ಕೆ ಮರಳಿತು. ಆನೆಗೊಂದಿಯ ರಾಜಮನೆತನದ ವಂಶಸ್ಥ ಶ್ರೀಕೃಷ್ಣ ದೇವರಾಯ ಮೆರವಣಿಗೆಗೆ ಚಾಲನೆ ನೀಡಿದರು. ಸಂಸದ ಕರಡಿ ಸಂಗಣ್ಣ, ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಂಡಿದ್ರು.