ನೋಡಿ ಸ್ವಾಮಿ ನಾವಿರೋದೆ ಹೀಗೆ... ಕುಡುಕರ ಕೆಲ 'ಕುಡುಕಾಸನ'ಗಳು ಇಲ್ಲಿವೆ ನೋಡಿ!

🎬 Watch Now: Feature Video

thumbnail
ಎಣ್ಣೆ ಬೇಕು ಅಣ್ಣಾ ಅಂತ ಕನವರಿಸುತ್ತಿದ್ದ ಮದ್ಯ ಪ್ರಿಯರಿಗೆ ಇಂದು ಸರ್ಕಾರ ಮದ್ಯ ಸಿಗುವಂತೆ ಮಾಡಿದೆ. ಇಂದು ಎಣ್ಣೆ ಹೊಡೆದ ಮೇಲೆ ಕೊಪ್ಪಳ ನಗರದಲ್ಲಿ ಕೆಲ ಕುಡುಕರು ಅಲ್ಲಲ್ಲಿ‌ ಕಿರಿಕ್ ಮಾಡಿಕೊಳ್ಳುತ್ತಿರುವ ಘಟನೆಗಳು ಜರುಗಿವೆ. ಎಣ್ಣೆ ಸಿಕ್ಕ ಖುಷಿಯಲ್ಲಿ ಫುಲ್ ಕುಡಿದು ಟೈಟ್ ಆಗಿರುವ ಕುಡುಕರು ಎಲ್ಲೆಂದರಲ್ಲಿ ನಿದ್ದೆಗೆ ಜಾರಿದ್ದಾರೆ. ಬಯಲು ಜಾಗ, ಸೇತುವೆ ಕೆಳಗಿನ ಫುಟ್​ಪಾತ್​ಗಳ ಮೇಲೆ ಎಣ್ಣೆ ಹೊಡೆದು ನಿದ್ದೆಗೆ ಜಾರಿದ್ದಾರೆ. ಕುಡುಕರ ಈ ಅವಾಂತರ ಕೆಲವರಿಗೆ ಮನರಂಜನೆ ನೀಡುತ್ತಿದೆ. ಇನ್ನು ಕೆಲವರು ಬಯಲು ಜಾಗಗಳಲ್ಲಿ ಕುಳಿತು ಶಂಕರಿಯನ್ನು ಗುಟುಕರಿಸುತ್ತಿದ್ದಾರೆ. ಇನ್ನು ಕೆಲವರಿಗೆ ಎಣ್ಣೆ ಸಿಗದಿದ್ದಕ್ಕೆ ಎಂಎಸ್ಐಎಲ್ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೂ ಇಳಿದಿದ್ದರು. ಅಲ್ಲದೇ ಬ್ಲಾಕ್​ನಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದೂ ಸಹ ಆರೋಪಿಸಿದರು. ಪರಿಣಾಮವಾಗಿ ರೇಲ್ವೆ ಸ್ಟೇಷನ್ ರಸ್ತೆ ಪ್ರದೇಶದಲ್ಲಿ ಕೆಲ ಕಾಲ ಮದ್ಯಮಾರಾಟ ಸ್ಥಗಿತಗೊಂಡಿತ್ತು. ಒಟ್ಟಿನಲ್ಲಿ ಎಣ್ಣೆ ಸಿಕ್ಕಮೇಲೆ ಮೊದಲ ದಿನವೇ ಮದ್ಯಪ್ರಿಯರ ಅವಾಂತರಗಳು ಶುರುವಾಗಿದಂತಾಗಿವೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.