ಬಂಡೀಪುರ ಕಾಳ್ಗಿಚ್ಚು ನಿಯಂತ್ರಿಸಲು ಬರ್ತಿದ್ದಾನೆ 'ಡ್ರೋಣಾ'ಚಾರ್ಯ - ಮುಂಜಾಗ್ರತಾ ಕ್ರಮವಾಗಿ ಕಾಡಂಚಿನಲ್ಲಿ ಡ್ರೋಣ್ ಬಳಸಲು ನಿರ್ಧಾರ
🎬 Watch Now: Feature Video
ಕಳೆದ ವರ್ಷ ಬಂಡೀಪುರ ಅರಣ್ಯದಲ್ಲಿ ಕಿಡಿಗೇಡಿಗಳಿಂದ ಬೆಂಕಿ ಹೊತ್ತಿಕೊಂಡು ಸಾವಿರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿತ್ತು. ಆ ಸಂದರ್ಭದಲ್ಲಿ ಸುಮಾರು ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದರು. ಸಮರ್ಪಕವಾಗಿ ಬೆಂಕಿಯನ್ನು ನಿಯಂತ್ರಿಸಲಾಗದೆ ಕಾಡು ಧಗಧಗಿಸಿದ್ದರಿಂದ ಎಚ್ಚೆತ್ತಿರುವ ಅರಣ್ಯ ಇಲಾಖೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಕಾಡಂಚಿನಲ್ಲಿ ಡ್ರೋಣ್ ಬಳಸಲು ನಿರ್ಧರಿಸಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ ವಲಯ, ಕುಂದಕರೆ ವಲಯ ಹಾಗೂ ಮದ್ದೂರು ವಲಯಗಳ ಕಾಡಂಚಿನಲ್ಲಿ ಡ್ರೋಣ್ ಕ್ಯಾಮಾರಾಗಳನ್ನು ಬಳಸಿ ಕಾಡಿನ ಮೇಲೆ ನಿಗಾ ಇಡಲಿದೆ.
Last Updated : Dec 10, 2019, 11:40 PM IST