ಎಲ್ಲರೂ ಸರ್ಜಿಕಲ್ ಮಾಸ್ಕ್ ಬಳಸಬೇಕಿಲ್ಲ.. ಯಾಕೆಂದು ಡಾ. ದೇವಿಶೆಟ್ಟಿ ಹೇಳ್ತಾರೆ ಕೇಳಿ.. - ಸರ್ಜಿಕಲ್ ಮಾಸ್ಕ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6722621-thumbnail-3x2-devi.jpg)
ಎಲ್ಲರೂ ಸರ್ಜಿಕಲ್ ಮಾಸ್ಕ್ ಬಳಸಬೇಡಿ ಎಂಸು ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ. ದೇವಿಶೆಟ್ಟಿ ಮನವಿ ಮಾಡಿದ್ದಾರೆ. ಎಲ್ಲರೂ ಈ ಮಾಸ್ಕ್ ಬಳಸಿದರೆ ವೈದ್ಯಕೀಯ ಸಿಬ್ಬಂದಿಗೆ ಇದರ ಕೊರತೆ ಎದುರಾಗಲಿದೆ. ಅಲ್ಲದೇ ಎಲ್ಲರೂ ಇದನ್ನು ಬಳಸುವುದರಿಂದ ವೈರಸ್ ಹರಡುವಿಕೆ ಜಾಸ್ತಿಯಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಸರ್ಜಿಕಲ್ ಮಾಸ್ಕ್ ಕೇವಲ 6 ಗಂಟೆ ಮಾತ್ರ ಬಳಸಬೇಕು. ಸರ್ಜಿಕಲ್ ಮಾಸ್ಕ್ ಹಾಕಿದ ವೇಳೆ ಕೆಮ್ಮಿದ್ರೆ, ಸೀನಿದ್ರೆ ಡ್ರಾಪ್‌ಲೆಟ್ಸ್ ಹೀರಿಕೊಳ್ಳುವುದಿಲ್ಲ. ಇದನ್ನು ಬಳಸಿ ಮನೆಯಲ್ಲಿಟ್ಟಾಗ ಮಕ್ಕಳು ಅದನ್ನು ಮುಟ್ಟಿದರೆ ವೈರಸ್ ಮತ್ತಷ್ಟು ಹರಡಲಿದೆ. ಹೀಗಾಗಿ ಸರ್ಜಿಕಲ್ ಮಾಸ್ಕ್ ಸಾರ್ವಜನಿಕರು ಬಳಸುವುದು ಬೇಡ. ಬಟ್ಟೆ ಮಾಸ್ಕ್‌ಗಳನ್ನ ಸಾರ್ವಜನಿಕರು ಬಳಸಿ. ಅದನ್ನ ತೊಳೆದು ಮತ್ತೆ ಮತ್ತೆ ಬಳಸಬಹುದು ಎಂದು ಮಾಸ್ಕ್ ಹಾಕಿಕೊಳ್ಳುವವರಿಗೆ ಡಾ. ದೇವಿ ಶೆಟ್ಟಿ ಮನವಿ ಮಾಡಿದ್ದಾರೆ.