ಡಿಕೆಶಿ ಬಂಧನ ನಂತರ ಬಲಗೊಳ್ಳುತ್ತಿದೆ ಒಕ್ಕಲಿಗ ಸಮುದಾಯದ ಧ್ವನಿ - ಒಕ್ಕಲಿಗ ಸಮುದಾಯ ಪ್ರತಿಭಟನೆ
🎬 Watch Now: Feature Video
ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಜಾರಿ ನಿರ್ದೇಶನಾಲಯದ ಬಲೆಗೆ ಬಿದ್ದ ನಂತರ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂಬ ಕೂಗು ಸ್ವಲ್ಪ ದೊಡ್ಡ ಮಟ್ಟದಲ್ಲಿಯೇ ಕೇಳಿಬರುತ್ತಿದೆ. ಇಡೀ ಒಕ್ಕಲಿಗ ಸಮುದಾಯವೇ ಡಿಕೆಶಿ ಪರ ನಿಂತಿದ್ದು, ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಒಕ್ಕಲಿಗ ಸಮುದಾಯದ ವಿವಿಧ ಸಂಘ-ಸಂಸ್ಥೆಗಳು ಮಠಾಧಿಪತಿಗಳು ಹಾಗೂ ನಾಯಕರನ್ನು ಒಳಗೊಂಡ ಬೃಹತ್ ಒಕ್ಕೂಟ ಡಿಕೆಶಿ ಪರ ಪ್ರತಿಭಟನೆಗೆ ನಿರ್ಧರಿಸಿದ್ದು, ಮೆರವಣಿಗೆಯನ್ನು ಕೂಡ ಹಮ್ಮಿಕೊಂಡಿದೆ.