ಎಸ್ ಎಲ್ ಧರ್ಮೇಗೌಡ ಆತ್ಮಹತ್ಯೆ ವೈಯಕ್ತಿಕ ವಿಚಾರವೋ, ರಾಜಕಾರಣವೋ ಗೊತ್ತಿಲ್ಲ : ಡಿಕೆಶಿ - ವಿಧಾನ ಪರಿಷತ್ ಉಪ ಸಭಾಪತಿ ಎಸ್ಎಲ್ ಧರ್ಮೇಗೌಡ ಸಾವು ಸುದ್ದಿ
🎬 Watch Now: Feature Video
ಧರ್ಮೇಗೌಡ ಆತ್ಮಹತ್ಯೆ ನಂಬಲಿಕ್ಕೆ ಸಾಧ್ಯವಿಲ್ಲ. ಯಾವುದಕ್ಕೆ ಧೈರ್ಯ ಕಳೆದುಕೊಂಡ್ರೋ ಅರ್ಥ ಆಗ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಎಸ್ ಎಲ್ ಧರ್ಮೇಗೌಡ ಸಾವಿನ ಕುರಿತು ಆಘಾತ ವ್ಯಕ್ತಪಡಿಸಿದರು. ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಧರ್ಮೇಗೌಡ ಅವರು ಬಹಳ ಸೂಕ್ಷ್ಮ ಮನಸ್ಸಿನ ವ್ಯಕ್ತಿ. ಅವರ ತಂದೆ ಕೂಡ ಶಾಸಕರಾಗಿದ್ದರು. ವೈಯಕ್ತಿಕ ವಿಚಾರವೋ, ರಾಜಕಾರಣವೋ ಗೊತ್ತಿಲ್ಲ. ಡೆತ್ ನೋಟ್ ಸಾರಾಂಶ ಇನ್ನೂ ತಿಳಿದಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಂಬನಿ ಮಿಡಿದರು. ರಾಜಕೀಯ ಕಾರಣಕ್ಕೆ ಆತ್ಮಹತ್ಯೆ ಮಾಡಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ನಾನು ಕಮೆಂಟ್ ಮಾಡಲ್ಲ. ಅವರ ನೋವಲ್ಲಿ ಅವರಿದ್ದಾರೆ, ಸಹಜವಾಗಿ ಆ ಪಕ್ಷಕ್ಕೆ ಆಘಾತವಾಗಿರುತ್ತದೆ ಎಂದು ತಿಳಿಸಿದರು.