ಪ್ರವಾಹ ಪರಿಹಾರ ವಿತರಣೆಯಲ್ಲಿ ತಾರತಮ್ಯ: ಬೆಳಗಾವಿಗೆ ರಾಮದುರ್ಗ ಸಂತ್ರಸ್ತರ ಪಾದಯಾತ್ರೆ - Shivayogeshwar Monastery
🎬 Watch Now: Feature Video
ಬೆಳಗಾವಿ: ಪ್ರವಾಹ ಪರಿಹಾರ ವಿತರಣೆಯಲ್ಲಿ ಆದ ತಾರತಮ್ಯ ಖಂಡಿಸಿ ರಾಮದುರ್ಗ ಪ್ರವಾಹ ಸಂತ್ರಸ್ತರು ತಾಲೂಕಿನ ಅವರಾದಿ ಗ್ರಾಮದಿಂದ ಪಾದಯಾತ್ರೆ ಆರಂಭಿಸಿದ್ದು, ಬೆಳಗಾವಿ ಡಿಸಿ ಕಚೇರಿಗೆ ಸಮಾಪ್ತಿಗೊಳಿಸಲಿದ್ದಾರೆ. ಫಲಹಾರ ಶಿವಯೋಗೇಶ್ವರ ಮಠದ ಶಿವಮೂರ್ತಿ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಅವರಾದಿ ಗ್ರಾಮ ಸೇರಿ ಸುತ್ತಮುತ್ತಲಿನ ಗ್ರಾಮಗಳ ನೆರೆ ಸಂತ್ರಸ್ತರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಪ್ರವಾಹಕ್ಕೆ ಬೆಳೆ, ಮನೆ ಕಳೆದುಕೊಂಡಿರುವ ಸಂತ್ರಸ್ತರು ಕಳೆದ 11 ತಿಂಗಳುಗಳಿಂದ ಬೀದಿಯಲ್ಲಿ ಜೀವನ ನಡೆಸುತ್ತಿದ್ದರೂ ಸರ್ಕಾರ ಇವರ ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.