'ಕಿಸ್' ನೋಡಿ ಖುಷ್ ಆದ ಆ್ಯಕ್ಷನ್ ಪ್ರಿನ್ಸ್... ಕನ್ನಡಿಗರಲ್ಲಿ ಮನವಿ ಮಾಡಿದ್ದೇನು? - _kiss movie\
🎬 Watch Now: Feature Video
ಬೆಂಗಳೂರು: ಎ.ಪಿ.ಅರ್ಜುನ್ ನಿರ್ದೇಶನದ ಕಿಸ್ ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬುಧವಾರ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಕುಳಿತು ಕಿಸ್ ಚಿತ್ರ ವೀಕ್ಷಿಸಿದರು. ಕಿಸ್ ಸಿನಿಮಾ ನೋಡಿದ ಬಳಿಕ ಚಿತ್ರದ ಡೈಲಾಗ್ ಹೊಡೆದು ನಟ ಸಂಭ್ರಮಿಸಿದರು. ಈ ವೇಳೆ ಮಾತನಾಡಿದ ಅವರು, ಕಿಸ್ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಕುಟುಂಬಸ್ಥರು ಕುಳಿತು ನೋಡುವಂತ ಸಿನಿಮಾ. ಆದರೆ, ಸೈರಾ ನರಸಿಂಹರೆಡ್ಡಿ ಹಾಗೂ ವಾರ್ ಚಿತ್ರಗಳಿಂದ ಮಲ್ಟಿಪ್ಲೆಕ್ಸ್ಗಳಲ್ಲಿ ಕಿಸ್ ಚಿತ್ರಕ್ಕೆ ತೊಂದರೆಯಾಗಿದೆ. ಕನ್ನಡಿಗರು ಇದನ್ನು ದಯವಿಟ್ಟು ಗಮನಿಸಬೇಕು. ಕನ್ನಡ ಸಿನಿಮಾಗಳನ್ನು ನೋಡಿ ಹರಸಿ ಎಂದು ಕನ್ನಡಿಗರಲ್ಲಿ ಮನವಿ ಮಾಡಿದರು.
Last Updated : Oct 3, 2019, 7:05 AM IST