ಸಿಎಂ ಸಚಿವರ ರಾಜೀನಾಮೆ ಪಡೆಯಲಿ: ಧ್ರುವ ನಾರಾಯಣ್ - KPCC working president Dhruvanarayan
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10848553-thumbnail-3x2-net.jpg)
ಮೈಸೂರು: ರಾಸಲೀಲೆ ಸಿಡಿ ಸುಳಿಯಲ್ಲಿ ಸಿಲುಕಿರುವ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆಯನ್ನು ಸಿಎಂ ಪಡೆಯಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವ ನಾರಾಯಣ್ ಆಗ್ರಹಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸಾರ್ವಜನಿಕ ಜೀವನದಲ್ಲಿ ಇರುವವರು ಯಾವಾಗಲೂ ಶುದ್ಧವಾಗಿರಬೇಕು. ನಮಗೆ ಎರಡು ಕಣ್ಣುಗಳು ಇದ್ದರೆ ನಮ್ಮನ್ನ ಸಾವಿರಾರು ಕಣ್ಣುಗಳು ನೋಡುತ್ತಿರುತ್ತೇವೆ. ಇಂತಹ ಸಂದರ್ಭದಲ್ಲಿ ನಾವು ಸರಿಯಾಗಿರಬೇಕು. ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ಕರ್ನಾಟಕದ ಜನತೆಯನ್ನು ತಲೆ ತಗ್ಗಿಸುವಂತೆ ಮಾಡಿದ್ದು, ಆ ಬಗ್ಗೆ ತನಿಖೆಯಾಗಲಿ. ಅದಕ್ಕೂ ಮುನ್ನ ಸಿಎಂ ತಕ್ಷಣ ಸಚಿವರ ರಾಜೀನಾಮೆ ಪಡೆಯಲಿ ಎಂದು ಒತ್ತಾಯಿಸಿದರು.